ಶುಕ್ರವಾರ, ಮಾರ್ಚ್ 18, 2011

ಜನ್ಮದ ಬಲ

ಇದು ಸೋಮ ಪದ್ಯ ಮೂಲಕ ಕೇಳಿದ ಪ್ರಶ್ನೆಗೆ ಒಂದು ಉತ್ತರ ::

ತಂದೆ ತಾತರು ಪಿತೃಗಳೆಲ್ಲರು 
ತಂದ ಪೂರ್ವಾಪರದ ಗತಿಗಳ
ಮುಂದುವರಿಸಿದ ತಳಿಯ ಪುಣ್ಯದ ಜನುಮವೆಮ್ಮಿರವು ||
ಹಿಂದೆ ಕೇಡಿಗರೆದುರು ಹೆದರಿರೆ
ಮುಂದೆ ಕುರುಗಳ ಕ್ಷೇತ್ರ ಯುದ್ಧದಿ
ತಂದೆ ಸಹಿತದಿ ಹೋರಿ ಮಡಿದವ ಹೇಡಿಯೆಂತಹನು?

[ಇನ್ನೂ ಮುಂದುವರಿಯಲೂ ಬಹುದು :-)]

- ರಾಮಚಂದ್ರ

8 ಕಾಮೆಂಟ್‌ಗಳು:

  1. All the five lines are perfect. Last line needs little nudging.

    tamde sahita kAdAdi madidava =3+3+5+4+3+4+2

    taMde saMgada hOri madidava hEdiyaaguvanE OR hEdiyeMtahanu? = 3+4+3+4+3+4+2 will make the last line

    ಪ್ರತ್ಯುತ್ತರಅಳಿಸಿ
  2. ಮೌಳಿ - ನಿಮ್ಮ ಸಲಹೆಗೆ ಧನ್ಯವಾದಗಳು. ಸರಿ ಮಾಡಿದ್ದೇನೆ.

    ಪ್ರತ್ಯುತ್ತರಅಳಿಸಿ
  3. Ram,

    ಬಹಳ ಬಹಳ ಚೆನ್ನಾಗಿದೆ, ತುಂಬಾ ಸಂತೋಷವಾಯ್ತು. ಒಪ್ಪಿದೆ. ನೀವು ಹೇಳಿರೋದು ಸತ್ಯ ವಿರಾಟ ಪರ್ವದ ಸಮಯಕ್ಕೆ ನನ್ನ ಮೊದಲ ಪದ್ಯ ಸರಿಯಿದೆ. ಎರಡನೇದು ಯುದ್ಧ ಪರ್ವಕ್ಕು ಹೇಳ್ತೀನಿ ಕೇಳಿ:

    ಬಾಲವಯದಲಿ ಹಾದಿ ತಪ್ಪಿದ
    ಲೋಲ ಸಖಿಯರ ತರುಣನಿವ ತಾ
    ಸಾಲ ತೀರಿಸೆ ಪಾಂಡು ಪುತ್ರಗೆ ಪ್ರಾಣವನೆ ಕೊಟ್ಟ :(
    ಕಾಲ ಪಥದಲಿ ಮನುಜನಡತೆಯು
    ವಾಲಿಪುದಕವಗುಣಗಳೆಲ್ಲವ
    ಜಾಲಿಸುತ ಹಿರಿಮೆಯನು ಏರಿದ ಉತ್ತರನೆ ಸಾಕ್ಷಿ

    ಪ್ರತ್ಯುತ್ತರಅಳಿಸಿ
  4. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ಏನಪ್ಪ ಇದು ಸವಾಲ್-ಜವಾಬ್....

    ಸೋಮಣ್ಣ ಏನಿದು...ಹಿ೦ಗೆ ಕುಮಾರ್ವ್ಯಾಸನ ತರ ಷಟ್ಪದಿಮೇಲೆ ಷಟ್ಪದಿ....ಹಲಗೆ ಬಳಪವ ಪಿಡಿಯದೆ-ಪದವನಿಟ್ಟಳುಪದೆ ಬರ್ತಾನೇ ಇದೆ.....ಸೂಪರ್....

    ಒ೦ದು ಸಣ್ಣ ಬದಲಾವಣೆ,
    ಸ೦ಧಿಯಾಗುವಲ್ಲೆಲ್ಲಾ ಮಾಡಲೇಬೇಕೆ೦ಬ ನಿಯಮ ಇದೆ...ಹಾಗಾಗಿ ಕೊನೆಯ ಸಾಲಿನಲ್ಲಿ....ಏರಿದ ಮತ್ತು ಉತ್ತರನೆ ಎರಡು ಪದಗಳು ಪೂರ್ವಪದದೊ೦ದಿಗೆ ಸೇರಬೇಕು...ಹೀಗೆ ಮಾಡಬಹುದು...
    "ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರ ನಾ"

    ಪ್ರತ್ಯುತ್ತರಅಳಿಸಿ
  6. ಶ್ರೀಶ :),

    ಹವ್ದು "ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರ ನಾ" ಸರಿಹೋಗತ್ತೆ ೪ನೆ ಪಾದಕ್ಕೆ

    ಪ್ರತ್ಯುತ್ತರಅಳಿಸಿ
  7. ಜಾಲಿಯಾಗಿದೆ ’ಛಂದ, ಸಂಧಿಯ’
    ಬೇಲಿಹೊದಿಸುವ ರೀತಿ, ಸಾಕ್ಷಿಯ
    ಮೂಲ, ’ಹಿರಿಮೆಯೊ? ಉತ್ತರನೊ?’ ಸಂದೇಹಕೇಡೆಯೇಕೆ?

    ಪ್ರತ್ಯುತ್ತರಅಳಿಸಿ