ಗುರುವಾರ, ಮಾರ್ಚ್ 17, 2011

ಭಾಮಿನಿಯಲ್ಲಿ ೩ ಪದ್ಯಗಳು

ಬರಿಯ ಜನ್ಮದ ಬಲ ಸಾಲದು:
-----------------------

ಬರಿಯ ಜನ್ಮದ ಬಲದಲೇನಿದೆ
ನರನನುತ್ತಮನೆಂದು ಬಗೆಯುವ
ಸ್ಥಿರದ ಶೌರ್ಯ ಕುಶಾಗ್ರಮತಿಯ ವಿಲಾಸ ಸೊಗಸುಗಳು?
ಪುರದ ರಾಜನ ಕುವರನಾದೊಡೆ
ತುರುಗಳನು ಹಿಡಿದೊಯ್ದ ಕೇಡಿಗ
ಕುರುಜನರ ಪವ್ರುಷವನಡಗಿಸೆ ಉತ್ತರೋತ್ತರನೆ? ||||
[ಕುರುಜನರ ಪವ್ರುಷವನಳಿಸದ ಉತ್ತರೋತ್ತರನೆ? ]

ಬಾಲವಯದಲಿ ಹಾದಿ ತಪ್ಪಿದ
ಲೋಲ ಸಖಿಯರ ತರುಣನಿವ ತಾ
ಸಾಲ ತೀರಿಸೆ ಪಾಂಡು ಪುತ್ರಗೆ ಪ್ರಾಣವನೆ ಕೊಟ್ಟ
ಕಾಲ ಪಥದಲಿ ಮನುಜನಡತೆಯು
ವಾಲಿಪುದಕವಗುಣಗಳೆಲ್ಲವ

ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರ ||||

ಜಪಾನಿನ ಭೀಕರ ದುರಂತದ ಬಗ್ಗೆ:
--------------------------

ಶಿವನ ಕಾಲ್ತುಳಿತದಲಿ ಅಲೆತಾಂ-
ಡವದ ನಾಟ್ಯಕೆ ಹೆಜ್ಜೆ ಹಾಕಿತೆ?
ಜವನ ಮಹಿಷನೆ ಕಪ್ಪು ಅಲೆಗಳ ರೂಪ ತಾಳಿದನೆs?
ರವಿಯ ಬೆಳಕನೆ ಮಾಸುವಂದದಿ
ಕವಿಸುತಲಿ ಕತ್ತಲೆಯ ನಿಮಿಷದೆ
ಸವೆಸಿದುದು ಜೀವಗಳ ಶರಧಿಯ ಮಂಥನದ ವಿಷವೇ?

8 ಕಾಮೆಂಟ್‌ಗಳು:

  1. Flow and rhythm is visible. Request to consider restructuring line 2,3 and 6.

    2. Remove the extra matra by making it narananuttama and not narananuttamma.
    3. 'Dhairya' must become sarvalaghu to match the alliteration. You may replace by using words like 'sthiradi'
    6. kourava is one guru and two laghus. To make it thrilaghu,words such as kurupathiya, kurujanara, kurunrupara could be considered.

    ಪ್ರತ್ಯುತ್ತರಅಳಿಸಿ
  2. ವಿಷಯ ಬಹಳ ಚೆನ್ನಾಗಿದೆ. ಭಾಮಿನಿಗೆ ಹೇಳಿ ಮಾಡಿಸಿದಂತೆ - ಅಥವಾ ಭಾಮಿನಿಯೇ ಇದಕ್ಕೆ ಹೇಳಿ ಮಾಡಿಸಿದಂತೆ. ಮೌಳಿ ಯವರು ಹೇಳಿದ ತೊಡಕುಗಳನ್ನು ಸರಿಪಡಿಸಿದರೆ ಪದ್ಯ ಇನ್ನೂ ಪರಿಪೂರ್ಣವಾದೀತು.

    ಪ್ರತ್ಯುತ್ತರಅಳಿಸಿ
  3. > ... ಪವ್ರುಷವನಡಗಿಸೆ ಉತ್ತರೋತ್ತರನೆ?
    ಇದು ಹೀಗಿರಬೇಕೇ ::
    ಪವ್ರುಷವನಡಗದೆ ಉತ್ತರೋತ್ತರನೆ?

    ಅಥವಾ
    ಪವ್ರುಷವನಳಿಸದೆ ಉತ್ತರೋತ್ತರನೆ?

    ಪ್ರತ್ಯುತ್ತರಅಳಿಸಿ
  4. Thanks for the comments

    @chandramouli,

    I shall make the changes suggested. uttama as uttamma was a typo will correct it.

    @Ram,
    ಪವ್ರುಷವನಡಗಿಸೆ ಉತ್ತರೋತ್ತರನೆ?
    in the above statement I meant ಪವ್ರುಷವನಡಗಿಸಲು ಉತ್ತರ ಉತ್ತರನೆ?
    ಈ ರೀತಿ ಪ್ರಯೋಗ ಮಾಡಬಹುದಲ್ವೆ?

    ಪ್ರತ್ಯುತ್ತರಅಳಿಸಿ
  5. Soma,

    Sure. I didn't get that point. I thought of uttarOttara as the best in future for that state. So, I was thinking - without having suppressed the thieves (kauravas) can he be designated as the future king?

    Your point is fine I think.

    ಪ್ರತ್ಯುತ್ತರಅಳಿಸಿ
  6. Ram,

    ನೀವು ಹೇಳಿದ್ದು ಚೆನ್ನಾಗಿದೆ, ಅದನ್ನು ಸೇರಿಸಿದ್ದೀನಿ

    ಪ್ರತ್ಯುತ್ತರಅಳಿಸಿ