ಭಾನುವಾರ, ಅಕ್ಟೋಬರ್ 16, 2011

ಕಂದವ ಭಾಮಿನಿಯ

ಕಂದವ ರಚಿಸಲ್ ಯತ್ನಿಸಿ
ಚಂದದಿ ಭಾಮಿನಿಯ ಪೂರ್ವದಲಿ ತನ್ನ ಮನದ
ಬಂದನದೊಳು ನಿಲಿಸಿರಬೇ
ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್

ಭಾನುವಾರ, ಸೆಪ್ಟೆಂಬರ್ 25, 2011

This blog has evolved into http://padyapaana.com

We have setup a site with more powerful features to make this blog more open and available to a broader segment of interested people. Please visit http://padyapaana.com

If you have any problems there, please mail rkekkar@gmail.com

ಈ ಬ್ಲಾಗನ್ನು ಇನ್ನೂ‌ ಹೆಚ್ಚು ಮಂದಿಗೆ ಉಪಯೋಗಕ್ಕೆ ಬರುವಂತೆ ಮಾಡಲು, ಪದ್ಯಪಾನ ಎಂಬ ಹೆಸರಿನ ಇನ್ನೊಂದು ವೆಬ್ ಸೈಟನ್ನು ಏರ್ಪಡಿಸಿದ್ದೇವೆ. ದಯವಿಟ್ಟು, ಅಲ್ಲಿ ಬನ್ನಿ. ಹೊಸ ವಿಳಾಸ ::‌ http://padyapaana.com
ಆ ಸೈಟಿನಲ್ಲಿ, ನಿಮಗೆ ಏನಾದರು‌ತೊಡಕಾದರೆ ಇವರನ್ನು ಸಂಪರ್ಕಿಸಿ :: rkekkar@gmail.com

ಬುಧವಾರ, ಸೆಪ್ಟೆಂಬರ್ 14, 2011

ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆ

ಇದು ಗಣೇಶ ರವರು ಕೊಟ್ಟ ಸಮಸ್ಯೆ

ಬರಿಯ ಭಾಮಿನಿಯಲ್ಲಿ ಸಾಗು-
ತ್ತಿರುವ ಕಾವ್ಯಕುತೂಹಲದಿ ಜನ
ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ
ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು
ತರದೆ ಭಾಮಿನಿಯನ್ನು ನೋಡರು
ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್"!!

ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ.
ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ.
ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ!

ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆ
ಮೂಡುವೆಣ್ಣಿನ ಕೆಂಪು ರಸವಾಗಿರೆ
ಮೋಡಿಮಾಡುವ ಮಲರಲಂಕೃತಿಗಳೆನಿಸಿರಲು
ನೋಡಿ ನಸುಕಿನ ಕವನ ನವನವೀನ

ಭಾನುವಾರ, ಸೆಪ್ಟೆಂಬರ್ 11, 2011

ಬುಧವಾರ, ಸೆಪ್ಟೆಂಬರ್ 7, 2011

ಸಮಸ್ಯೆ - "ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"

ಸೆಳೆಹಿತದಿಕಸ ಶರಧಿಸೇರುಗೆ
ಕೆಳೆಹಿತದಧಮ ಹಿರಿದುಕಾಂಬುಗೆ
ಕಳೆಹಿತದಭಾಮಿನಿಯು ಶರಣಗೆ ದಾರಿ ತೋರುವಳು
ತಳೆದೆನೀಗಲೆ ಕಾವ್ಯ ಸಂಶಯ
ಗೆಳೆಯಹಿತಜನರಿದನು ಪರಿಕಿಸಿ
"ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"
ಮೊದಲು, ಸಮಸ್ಯೆಯನ್ನು
"ನಳನಳಿಸದೆಯೆ ಸೋತರವರು ಪ್ರಕೃತೀಶ್ವರರು"
ಎಂಬುದಾಗಿರಿಸಿದ್ದೆ. ಅದರಲ್ಲಿ ಚ್ಛಂದೋದೋಷವಿತ್ತು.
ಗಣೇಶರ ಸಲಹೆಯಂತೆ, ಅದನ್ನು ಬದಲಿಸಿದ್ದೇನೆ.
ಸಮಸ್ಯೆ - ಭಾಮಿನಿಯಲ್ಲಿ ಕೊನೆಯ ಸಾಲು ಬರುವಂತೆ
"ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"

ಶನಿವಾರ, ಸೆಪ್ಟೆಂಬರ್ 3, 2011

ಅದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ

ಸ್ನೇಹಿತರೇ,
ಇನ್ನೊಂದು ಸಮಸ್ಯೆ...

"ಅದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ"

ನಾಳೆ ಭಾನುವಾರವಿದೆ... ಎಲ್ಲರು ಪ್ರಯತ್ನಿಸಬೇಕಾಗಿ ವಿನಂತಿ :)
ನಾಳೆ ರಾತ್ರಿ ನನ್ನ ಪರಿಹಾರ post ಮಾಡುತ್ತೇನೆ

ಗುರುವಾರ, ಸೆಪ್ಟೆಂಬರ್ 1, 2011

ಸಮಸ್ಯೆ - "ರಾವಣಾಗಮನವನುಕಾದಳುಸೀತೆಕಾತುರದಿ"

ನಾವುಮಿತ್ರರು ಪಯಣ ಬೆಳೆಸಿರೆ
ಭಾವ ಕಲಕುವ ಸಾಲು ಕಂಡೆವು
"ರಾವಣಾಗಮನವನುಕಾದಳುಸೀತೆಕಾತುರದಿ"
ತಾವು ಕಾವ್ಯದಿ ಚತುರ ಮತಿಗಳು
ಸಾವಕಾಶದಲಿದನು ಚಿಂತಿಸಿ
ಬೇವಸಾಲಿಗೆಬೆಲ್ಲಬೆರೆಸುತಹಿತವನುಣಿಸುವಿರಾ?

ಭಾಮಿನಿ ಕೊನೆ ಸಾಲು - "ರಾವಣಾಗಮನವನುಕಾದಳುಸೀತೆಕಾತುರದಿ"