ಮಂಗಳವಾರ, ಆಗಸ್ಟ್ 30, 2011

ವರ್ಣಚ್ಯುತಕ : ಚಿತ್ರಕವಿತ್ವದ ಒಂದು ಸರಳ ಪ್ರಯೋಗ

ನಗಜೆ ಭೂಮಿ ಲಕ್ಷ್ಮಿ ಪೆಸರ

ಸೇರಿಸಿದರೆ ನಾಲ್ಕಕ್ಷರ

ಕೊನೆಗೆಸೇರೆ ಒಂದಕ್ಷರ

ಹೆಸರೊಂದೇ ಐದಕ್ಷರ

ಎಡದಕ್ಷರವೂಂದೊಂದನು

ತೆಗೆದು ನೋಡಿ ಚೋದ್ಯವಿದನು

ಗಣಪ ಬ್ರಹ್ಮ ಷಣ್ಮುಖರು

ಮನ್ಮಥನಗ್ನಿಯು ಬಹರು

ಈ ವರ್ಣಚ್ಯುತಕದ ಸೂಚನೆ ಹೀಗಿದೆ.

ಪಾರ್ವತಿ, ಭೂಮಿ, ಮಹಾಲಕ್ಷ್ಮಿ ಇವರೆಲ್ಲರ ಹೆಸರನ್ನೂ ನಾಲ್ಕು ಅಕ್ಶರದಲ್ಲಿ ಹಿಡಿದಿಡಬಹುದು. ಅದಕ್ಕೆ ಇನ್ನೊಂದು ಅಕ್ಷರವನ್ನು ಸೇರಿಸಿದಾಗ ಐದು ಅಕ್ಷರಗಳಾಗುತ್ತವೆ. ಈ ಐದಕ್ಷರದ ಪದದ ಎಡಭಾಗದ ಒಂದೊಂದೇ ಅಕ್ಷರವನ್ನು ತೆಗೆಯುತ್ತಾ ಹೋದರೆ, ಬೇರೆ ಐವರ ಹೆಸರುಗಳು, ಅಂದರೆ, ಗಣೇಶ, ಬ್ರಹ್ಮ ಷಣ್ಮುಖ, ಮನ್ಮಥ ಮತ್ತು ಅಗ್ನಿ ಇವರ ಹೆಸರುಗಳು ಲಭ್ಯ. ಹಾಗಾದರೆ ಆ ಐದಕ್ಷರದ ಪದ ಯಾವುದು

ಬುಧವಾರ, ಆಗಸ್ಟ್ 24, 2011

ಪದ್ಯರಚನೆಗೆ ಕೈಪಳಗಲು ಮತ್ತೊಂದು ಸಮಸ್ಯೆ: ಭಾಮಿನೀ ಛಂದ

"ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು" (ಕೊನೆಯ ಸಾಲು)

ಶ್ರೀಶ ರಾಮ ಸೋಮ ಕಾಂಚನೇತರರೂ ಸಹ ಮೊದಲಿಡಬಹುದು

ಭಾನುವಾರ, ಆಗಸ್ಟ್ 21, 2011

ಮಂಗಳವಾರ, ಆಗಸ್ಟ್ 16, 2011

ಕಪಿಯ ವಿವಾಹಗೊಂಡಳುಮೆ-- ಸಮಸ್ಯೆ

ಇದೊಂದು ಅವಧಾನಪ್ರಿಯರೆಲ್ಲರಿಗೆ ತಿಳಿದಿರಬಹುದಾದ ಸಮಸ್ಯೆ. ಪೂರಿಸಲು, ಎರಡು ಛಂದೋಪ್ರಕಾರಗಳಲ್ಲೂ ಪ್ರಯತ್ನಿಸಬಹುದು.


ಭಾಮಿನೀ ಷಟ್ಪದಿಯ ಕೊನೆಯಸಾಲಿನಲ್ಲಿ


ಕಪಿಯ ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ


ಇದೇಸಮಸ್ಯೆ ಚಂಪಕಮಾಲಾವೃತ್ತದ ಕೊನೆಯಸಾಲಿನಲ್ಲಿ

ಕಪಿಯ
ವಿವಾಹಗೊಂಡಳುಮೆ ಸಾರ್ಥಕ ಪೂತ ತಪಃಪ್ರಭಾವದಿನ್


ಬುಧವಾರ, ಆಗಸ್ಟ್ 10, 2011

ಸಮಸ್ಯಾಪೂರ್ಣ ೨

ಗೆಳೆಯರೇ ಇನ್ನೊಂದು ಸಮಸ್ಯೆ :)

ಭಾಮಿನಿ ಷಟ್ಪದಿಯ ಕೊನೆಯ ಸಾಲು ಕೊಟ್ಟಿದ್ದೇನೆ, Aug 15ರೊಳಗೆ ಪರಿಹಾರವನ್ನು(ಗಳನ್ನು) ಎದಿರು ನೋಡಬಹುದೇ?
ರಾಣಿಯಗ್ನಿಯೊಳುರಿಯೆ ರಾಜನು ಮುದದಿ ಮಲಗಿದನು

ಸೋಮವಾರ, ಆಗಸ್ಟ್ 8, 2011

ಒಗಟು: ಯಾರಿವರು ಹೇಳಿರೈ?

ಉತ್ತರನ ತಂಗಿ ಗಂಡನ ಪಿತನು ಯುಧ್ಧದಲಿ
ಕುತ್ತಿಗೆಯ ತೆಗೆದವನ ಹೆಂಡತಿಯದಾರು? || ೧ ||
ಮತ್ಸರದೆ ತಲೆ ಕೊಯ್ದವನ ತಂಗಿ ಮಕ್ಕಳನು
ಕತ್ತಲೊಳು ಮಲಗಿರಲು ಶಿರವುರುಳಿಸಿದನಾರ್? || ೨ ||
ಚಿತ್ರಾಂಗದನ ನಲ್ಲೆಯರ ಗೆದ್ದ ಮಹಿಮನಾ
ಮಾತೃವನು ತಲೆಯಮೇಲಿರಿಸಿದವನಾರು? || ೩ ||
ಕ್ಷಾತ್ರತನವನುಬಿಟ್ಟು ತೀರ್ಥಯಾತ್ರೆಯಗೈದು
ಭ್ರಾತೃ ಸಂವೇದನೆಗೆ ಅಪವಾದನಾರು? || ೪ ||