ಭಾನುವಾರ, ಆಗಸ್ಟ್ 28, 2011

ಸಮಸ್ಯೆ, ಭಾಮಿನಿ ಕೊನೆ ಸಾಲು: ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ :)

ಸಮಸ್ಯೆ, ಭಾಮಿನಿ ಕೊನೆ ಸಾಲು :)
ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ

8 ಕಾಮೆಂಟ್‌ಗಳು:

  1. ತಕ್ಷಣಕ್ಕೆ ಅನಿಸಿದ್ದು...

    ನೆರೆಯ ರಾಜನ ಪೀಡೆ ಹೆಚ್ಚಿ ಸ
    ಮರದೊಳವನನು ಗೆಲಲು ಸಾಗದೆ
    ಪರಮವೈರಿಗಳವನಿಗಾರೆನೆ ಶೋಧಿಸುತಲವರ
    ನೆರವ ಕೋರುತ ಸಂಗರದ ಪರಿ-
    ಕರವ ಸಾಗಿಸಿ ನಿಜವಿರೋಧಿಯ
    ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ

    ಪ್ರತ್ಯುತ್ತರಅಳಿಸಿ
  2. ಮೌಳಿಯವರೇ,

    ಶತ್ರುವಿನ ಶತ್ರುವಿಗೆ ಎಂಬ ಪರಿಹಾರ ಚೆನ್ನಾಗಿದೆ.

    ನನ್ನ ಪರಿಹಾರಗಳು ಸಾಧುವಲ್ಲ ಎಂದು ತಿಳಿಯಿತು, ನಾನು 'ಡಿಂಗರಿಗಳಿಗೆ' ಎಂದು ಪರಿಹಾರ ಕೊಡೋಣ ಅಂತ ಇದ್ದೆ. ಡಿಂಗರ, ಡಿಂಗರಿಗ = ಸೇವಕ
    ಆದರೆ ಡಿಂಗರರಿಗೆ, ಡಿಂಗರಿಗರಿಗೆ ಎನ್ನುವುದಷ್ಟೇ ಸಾಧು ರೂಪ ಎಂದು ತಿಳಿಯಿತು.

    ಬಹಳ ಯೋಚನೆ ಮಾಡಿದೆ... ಆದರೂ... ನನ್ನ ಬಳಿ ಬೇರೆಯ ಪರಿಹಾರ ಸಿಗುತ್ತಿಲ್ಲ

    ಕ್ಷಮೆಯಿರಲಿ

    ಪ್ರತ್ಯುತ್ತರಅಳಿಸಿ
  3. ಅಡ್ಡಿಯಲ್ಲ. ಈಗ ಇನ್ನೊಂದು ಪೂರಣ...

    ಸರಿಸಮನೆ ಸ್ತ್ರೀಪುರುಷರೆಲ್ಲರ
    ಧುರಸಮರ್ಥರ ಮಾಡೆ ನಾರೀ
    ಜನರಿಗಾಹವ ತಂತ್ರಗಳ ಮಂತ್ರಗಳ ಬೋಧಿಸುತ
    ಪುರದ ಯುವತಿಯರೆದ್ದುನಿಲೆ ಸಂ-
    ಗರದೊಳೆರಡುರಸ ಮೆರೆಯೆ ವಿಭಾ-
    ವರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ


    ಎರಡುರಸ = ಶೃಂಗಾರ, ವೀರ

    ವಿಭಾವರಿ = ಸ್ತ್ರೀ

    ಪ್ರತ್ಯುತ್ತರಅಳಿಸಿ
  4. ಪರರ ಲಂಪಟತನವ ನೋಡುತ
    ಭರದಿ ದೋಚುವರನ್ನು ಸಹಿಸುತ
    ಪರಮ ಸಾತ್ವಿಕನೆಂಬ ಮನಮೋಹನನು ಮರುಳಾದ |
    ಮೆರೆದಹಮ್ಮಿನ ಕುಟಿಲ ಮಂತ್ರಿಗ -
    ಳೊರೆದ ಸಲಹೆಯ ಕಾರ್ಯಕಿಳಿಸುತ
    ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ ||

    ಪ್ರತ್ಯುತ್ತರಅಳಿಸಿ
  5. ಮರೆಯುವೆವೆ ನಾವಂದಿನಾ ದಿನ
    ಚರಿತೆಯಲ್ಲೀ ನಮ್ಮ ರಾಜ್ಯದ
    ಮೆರೆದು ಬಹುಮತ ಭಾಜಪವು ಗೆಲಿದತಿಯ ಮಧುರ ಚಣ
    ಪೊರೆಯುತಲಿ ಬರಿ ನೆಂಟರಿಷ್ಟ್ರರ
    ತೊರೆದು ಸದ್ಗುಣ,ಗುಟ್ಟಲೊಳಗಿನ
    ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ

    ಪ್ರತ್ಯುತ್ತರಅಳಿಸಿ
  6. ಧರ್ಮಯುದ್ಧವದಾರಭಗೊಳ
    ಲ್ಮೊದಲು ಹಿಂಜರಿದಾ ಕಿರೀಟಿ ಮು
    ರಹರ ಬೋಧಿಸಲಾಗ ಧರ್ಮವ ಮನದೆ ಕಾಣುತಲಿ|
    ಸಮರಗೈದಲ್ಲದುಪದೇಶಿಸ
    ದನೆ ಶತಾನೀಕಾದಿ ತನ್ನಾ
    ಮರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ||

    ಪ್ರತ್ಯುತ್ತರಅಳಿಸಿ
  7. ಚಂದ್ರ ಮೌಳಿ, ರಾಮ್, ಕಾಂಚನ, ಪ್ರಸದು ಅವರೇ

    ನನ್ನ ಸಮಸ್ಯೆ ಎಡವಟ್ಟಾಗಿದ್ದರು... ಅದಕ್ಕೆ ಪರಿಹಾರ ಕೊಟ್ಟಿದ್ದೀರ ಧನ್ಯವಾದಗಳು :)

    ಪ್ರಸಾದ್ ಅವರು (ನನ್ನ ಪ್ರಕಾರ) ಮೊದಲಸಲ ಪ್ರಯತ್ನ ಪಟ್ಟಿದ್ದಾರೆ ಕಾವ್ಯ ಕುತೂಹಲದಲ್ಲಿ... ಅವರಿಗೆ ವಿಶೇಷ ಧನ್ಯವಾದಗಳು... ದಯವಿಟ್ಟು ಭಾಗವಹಿಸುತ್ತ ಇರಿ :)

    ಪ್ರತ್ಯುತ್ತರಅಳಿಸಿ
  8. ಅಮೇರಿಕಾದ ಷಡ್ಯ೦ತ್ರ:

    ಕರೆದು ಮ೦ತ್ರಿಯ ತನಿಖೆ ಗೈಯುತ
    ಲರಿತ ಲರಸನು ಸತತವಾಯುಧ
    ಪರದಿ ಯೊಳ್ಕರ ತು೦ಬಿಬಿಡುವುದು ರಾಜ್ಯಬೊಕ್ಕಸವಾ|| (ಪರದು - ಮಾರಾಟ)
    ತರಿಸಿ ಹಳೆಯಾಯುಧವ ಹೊತ್ತಿಸ
    ವರವರೊಳಗಡೆ ಜಗಳ ವೆನ್ನುತ
    ಲರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ ||

    ಪ್ರತ್ಯುತ್ತರಅಳಿಸಿ