ಮಂಗಳವಾರ, ಆಗಸ್ಟ್ 30, 2011

ವರ್ಣಚ್ಯುತಕ : ಚಿತ್ರಕವಿತ್ವದ ಒಂದು ಸರಳ ಪ್ರಯೋಗ

ನಗಜೆ ಭೂಮಿ ಲಕ್ಷ್ಮಿ ಪೆಸರ

ಸೇರಿಸಿದರೆ ನಾಲ್ಕಕ್ಷರ

ಕೊನೆಗೆಸೇರೆ ಒಂದಕ್ಷರ

ಹೆಸರೊಂದೇ ಐದಕ್ಷರ

ಎಡದಕ್ಷರವೂಂದೊಂದನು

ತೆಗೆದು ನೋಡಿ ಚೋದ್ಯವಿದನು

ಗಣಪ ಬ್ರಹ್ಮ ಷಣ್ಮುಖರು

ಮನ್ಮಥನಗ್ನಿಯು ಬಹರು

ಈ ವರ್ಣಚ್ಯುತಕದ ಸೂಚನೆ ಹೀಗಿದೆ.

ಪಾರ್ವತಿ, ಭೂಮಿ, ಮಹಾಲಕ್ಷ್ಮಿ ಇವರೆಲ್ಲರ ಹೆಸರನ್ನೂ ನಾಲ್ಕು ಅಕ್ಶರದಲ್ಲಿ ಹಿಡಿದಿಡಬಹುದು. ಅದಕ್ಕೆ ಇನ್ನೊಂದು ಅಕ್ಷರವನ್ನು ಸೇರಿಸಿದಾಗ ಐದು ಅಕ್ಷರಗಳಾಗುತ್ತವೆ. ಈ ಐದಕ್ಷರದ ಪದದ ಎಡಭಾಗದ ಒಂದೊಂದೇ ಅಕ್ಷರವನ್ನು ತೆಗೆಯುತ್ತಾ ಹೋದರೆ, ಬೇರೆ ಐವರ ಹೆಸರುಗಳು, ಅಂದರೆ, ಗಣೇಶ, ಬ್ರಹ್ಮ ಷಣ್ಮುಖ, ಮನ್ಮಥ ಮತ್ತು ಅಗ್ನಿ ಇವರ ಹೆಸರುಗಳು ಲಭ್ಯ. ಹಾಗಾದರೆ ಆ ಐದಕ್ಷರದ ಪದ ಯಾವುದು

11 ಕಾಮೆಂಟ್‌ಗಳು:

  1. ಸೂಚನೆಯಲ್ಲಿ ಒಂದು ತಿದ್ದುಪಡಿ

    ಪಾರ್ವತಿ, ಭೂಮಿ, ಮಹಾಲಕ್ಷ್ಮಿ ಇವರೆಲ್ಲರ ಹೆಸರನ್ನೂ ನಾಲ್ಕು ಅಕ್ಷರಗಳಲ್ಲಿ ಹಿಡಿದಿಡಬಹುದು. ಅದಕ್ಕೆ ಇನ್ನೊಂದು ಅಕ್ಷರವನ್ನು ಸೇರಿಸಿದಾಗ ಐದು ಅಕ್ಷರಗಳ ಒಂದು ನಾಮಪದವಾಗುತ್ತದೆ. ಈ ಪಂಚಾಕ್ಷರಿಯ ಎಡಭಾಗದ ಒಂದೊಂದೇ ಅಕ್ಷರವನ್ನು ತೆಗೆಯುತ್ತಾ ಹೋದರೆ,ಮತ್ತೆ ಬೇರೆ ನಾಲ್ವರ ಹೆಸರುಗಳು ಲಭ್ಯ. ಆ ಐದು ಹೆಸರುಗಳು ಇವು: ಗಣೇಶ, ಬ್ರಹ್ಮ, ಷಣ್ಮುಖ, ಮನ್ಮಥ ಮತ್ತು ಅಗ್ನಿ. ಹಾಗಾದರೆ ಆ ಐದಕ್ಷರದ ನಾಮಪದ ಯಾವುದು?

    ಪ್ರತ್ಯುತ್ತರಅಳಿಸಿ
  2. ನನಗೆ ಹೆಸರು ಸಿಕ್ಕಿದೆ ಅಂದು ಕೊಂಡಿದ್ದೇನೆ. ಆದರೆ ಪಾರ್ವತಿ, ಭೂಮಿ ಹಾಗೂ ಲಕ್ಷ್ಮಿಯರ ಹೆಸರುಗಳನ್ನು ಇನ್ನೂ ಹೊಂದಿಸಲಾಗಿಲ್ಲ.

    ಪ್ರತ್ಯುತ್ತರಅಳಿಸಿ
  3. ಗುಡ್.ಪ್ರಯತ್ನಿಸಿ.ಸೂಚನೆಯ ಎಲ್ಲಾ ನಿಯಮಗಳೂ ಅನ್ವಯವಾದಾಗ ಹೇಳಿ. ಅನುಮಾನವಿದ್ದರೆ ಪ್ರತ್ಯೇಕವಾಗಿ ಸಂಪರ್ಕಿಸಬಹುದು. ವಂದನೆ.

    ಪ್ರತ್ಯುತ್ತರಅಳಿಸಿ
  4. ನನಗೊಂದು ಸಿಕ್ಕಿತು ಅದರಲ್ಲಿ ಪಾರ್ವತಿ, ಲಕ್ಷ್ಮಿ, ಭೂಮಿ, ಗಣೇಶ, ಷಣ್ಮುಖ, ಮನ್ಮಥ ಸಿಕ್ಕರು
    ನಿಯಮದ ಪ್ರಕಾರ ಬ್ರಹ್ಮ ಮತ್ತು ಅಗ್ನಿ (ಏಕಾಕ್ಷರ) ಸರಿಹೋಗತ್ತ ಗೊತ್ತಾಗ್ತಿಲ್ಲ

    ಪ್ರತ್ಯುತ್ತರಅಳಿಸಿ
  5. ಚಂದ್ರಮೌಳಿಯವರೇ :),
    ನಿಮ್ಮ ಪ್ರಶ್ನೆ ಚೆನ್ನಾಗಿತ್ತು!

    ನಿಮಗೆ ಕಳುಹಿಸಿದ ಪರಿಹಾರವನ್ನು post ಮಾಡುತ್ತಿದ್ದೇನೆ.

    ನನ್ನ ಪರಿಹಾರ:
    ಉಮಾಕುಮಾರ : ಗಣೇಶ
    ಮಾಕುಮಾರ : ಬ್ರಹ್ಮ
    ಕುಮಾರ : ಷಣ್ಮುಖ
    ಮಾರ: ಮನ್ಮಥ
    ರ: ಅಗ್ನಿ
    ಮಾ: ಲಕ್ಷ್ಮಿ
    ಕು: ಭೂಮಿ
    ಉಮಾ: ಪಾರ್ವತಿ

    ಪ್ರತ್ಯುತ್ತರಅಳಿಸಿ
  6. ಚಂದ್ರಮೌಳಿಯವರೇ ನೀವು ಕೊಟ್ಟ ಪ್ರಶ್ನೆ - ವರ್ಣಚ್ಯುತಕದ್ದು ಹಾಗು ಅಷ್ಟೇ ಜಾಣತನದಿಂದ ಸೋಮರವರು ಕೊಟ್ಟ ಉತ್ತರ ಎರಡೂ ತುಂಬಾ ಚೆನ್ನಾಗಿವೆ. ಪದ್ಯ ರಚನೆಯ ಹೊಸ ವಿಧಾನವನ್ನು ಪರಿಚಯಿಸಿದ್ದೀರ ಅದಕ್ಕಾಗಿ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  7. ವರ್ಣಚ್ಯುತಕವನೆಂತೋ
    ಪೂರ್ಣಂಗೆಯ್ದೆನಗೆ ಮುದಮನಿತ್ತೀ ಸೋಮಂ
    ಪೂರ್ಣೋದರನಿಗಮಿಂದುವು
    ತೂರ್ಣಾನಂದಮನೆ ನೀಳ್ದ ಪರಿಯಿ ತೋರ್ಪಂ
    (ಪೂರ್ಣೋದರ=ಗಣಪತಿ)

    ಪ್ರತ್ಯುತ್ತರಅಳಿಸಿ