ಶನಿವಾರ, ಮಾರ್ಚ್ 19, 2011

ಅನಾಸಕ್ತರಿಗೂ 'ವಿಶ್ವಕಪ್ ಕ್ರಿಕೆಟ್'ನ ಕೊಡುಗೆ (ಭಾಮಿನಿ)

ಆಟವಿದ ಬಹು ರೋಚಕದೆ ಜನ
ಗೂಟ ಹೊಡೆಯುತ ದೂರದರ್ಶನ
ನೋಟ ನೋಡಲು ಎಲ್ಲ ಸಮಯವ ಮೀಸಲಿಡುತಿಹರು!
ಸ್ಫೋಟದಲೆ ಬೆಳೆದಿರುವ ದೇಶದ
ಕಾಟದತಿ ಬಂಡಿಗಳ ಪಥಗಳು
ಮಾಟವೆನೆ ಸುಲಭದಲಿ ಕೆಲಸವ ಮಾಡೆ ತೆರೆದಿಹವು!!!

3 ಕಾಮೆಂಟ್‌ಗಳು:

  1. ಸೋಮನ ಕಾಲೆಳೆಯಲು ಭಾಮಿನಿಯಲೊಂದು ಉತ್ತರವನ್ನು ಕೊಡುತ್ತಿದ್ದೇನೆ...

    ಸಿಕ್ಕ ವಿಷಯವ ಹಿಡಿದು ಪದಗಳ
    ಪಕ್ಕ ಪಕ್ಕದಿ ಇಡುತ, ಸುಲಭದಿ
    ದಕ್ಕದಂತಹ ಕಾರ್ಯದಲಿ ನೀ ಮಘ್ನನಾಗಿರುವೆ |
    ಮಿಕ್ಕ ಯೋಚನೆ ಬಿಟ್ಟ ನಿನಗೆ
    ತಕ್ಕ ಪಾಠವ ಕಲಿಸಲೆಂದೇ
    ಚಿಕ್ಕ ಚಾಡಿಯ ಅತ್ತಿಗೆಗೆ ನಾ ಹೇಳಿ ಬಂದಿರುವೆ ||

    ಪ್ರತ್ಯುತ್ತರಅಳಿಸಿ
  2. ಸೋಮ-ವಿಶ್ವರೆ ನಿಜಕು ಸುಂದರ
    ಭಾಮಿನಿಗಳಾತ್ಮೀಯ ಸಲುಗೆಯ
    ಪ್ರೇಮಭರಿತ ಕ್ರಿಡೆ ಪ್ರಸ್ತುತ ಭಾವ ಚೇಷ್ಟಿತವು.

    ವಿಶ್ವರ ಪದ್ಯದ ಕೊನೆಯಸಾಲು ಆಹ್ಲಾದದಾಯಕ. ನಾಲ್ಕನೇಸಾಲಿಗೆ ಒಂದು ಮಾತ್ರೆ ನುಂಗಿಸಿದರೆ, ಭಾಮಿನಿಯ ಸೌಷ್ಟವ ಮುದಿತವಾಗುವುದೇನೋ.

    ಪ್ರತ್ಯುತ್ತರಅಳಿಸಿ