ಶುಕ್ರವಾರ, ಏಪ್ರಿಲ್ 22, 2011

ಒಂದು ಶುಭಾಶಯಪತ್ರ

ಸಕ್ಕರೆಸವಿಯನು ಪೂರ್ವಾಶ್ರಮದಲಿ
ಯಕ್ಕರೆಸೂಸುತ ತವರಿಗೆ ನೀಡಲು
ಉಕ್ಕಿದ ಅಮ್ಮನ ಪ್ರೀತಿಗೆ ನೀನೇ ಪೂರಣೆಯಾಗಿರುವೆ |
ಬಿಕ್ಕುತಯೊಳಗಡಿಯಿರಿಸುತ ನಲ್ಮೆಯ-
ಸಿಕ್ಕಲಿ ಸಿಲುಕಿಸಲೆಮ್ಮಯ ಮನಗಳ
ಹೊಕ್ಕುತಲಣ್ಣನ ಹೃದಯವ ನೀನೇ ವಿಜಯವ ಪಡೆದಿರುವೆ ||

(*ಅತ್ತಿಗೆ - ಅನ್ನಪೂರ್ಣೆ, ಅಣ್ಣ - ವಿಜಯ)

-ರಜನೀಶ

4 ಕಾಮೆಂಟ್‌ಗಳು:

  1. ರಜನೀಶ - ಬಹಳ ಚೆನ್ನಾಗಿದೆ. ಇನ್ನೂ ಒಂದೆರಡು ಪದ್ಯಗಳನ್ನು ಇದೇ ಜಾಡಿನಲ್ಲಿ ಸೇರಿಸಬಹುದು ಅನ್ನಿಸುತ್ತದೆ

    ಪ್ರತ್ಯುತ್ತರಅಳಿಸಿ
  2. ರಾಮಚಂದ್ರ - ಧನ್ಯವಾದಗಳು. ಪದ್ಯವನ್ನುಬೆಳೆಸಲು ಪ್ರಯತ್ನಿಸುವೆ.

    ಪ್ರತ್ಯುತ್ತರಅಳಿಸಿ
  3. ಚೊಕ್ಕವೆ ಪದ್ಯವದೆರಡನೆಸಾಲಲಿ
    ಚಿಕ್ಕಲಘುಬೆರೆಯೆ "ತವರಿಗೆ ನೀಡಲು"
    ಮಿಕ್ಕವು ಸರಿಯಿದೆ ರಜನೀಶರೆ ಭಾವಕ್ಕಿದೆ ಬಲಸೆಳೆತ

    ಪ್ರತ್ಯುತ್ತರಅಳಿಸಿ
  4. ರಜನೀಶ,

    ಬಹಳ ಚೆನ್ನಾಗಿದೆ :).

    ಒಂದಂಶವನ್ನು ನೀವು ಮುಂದಿನ ಪದ್ಯಗಳಲ್ಲಿ ಗಮನಿಸಕೊಳ್ಳಬಹುದು ಎಂದು ನನ್ನ ಅನಿಸಿಕೆ. ಸಂಧಿಯಾಗುವ ಕಡೆಯೆಲ್ಲ ಸಂಧಿ ಮಾಡಿದರೆ ಇನ್ನು ಸೊಗಸಿರುತ್ತದೆ.
    ಉದಾ:
    ಉಕ್ಕಿದ ಅಮ್ಮನ -> ಉಕ್ಕಿದಮ್ಮನ
    ಸಿಲುಕಿಸಿ ಎಮ್ಮಯ -> ಸಿಲುಕಿಸೆಮ್ಮಯ
    ಹೊಕ್ಕುತ ಅಣ್ಣನ -> ಹೊಕ್ಕುತಣ್ಣನ

    ಮತ್ತು ಈರೀತಿ ಸಂಧಿ ಮಾಡಿದ ಮೇಲೆ. ಛಂದೋಗತಿ ಗಮನಿಸಬೇಕಾಗುತ್ತದೆ

    ಪ್ರತ್ಯುತ್ತರಅಳಿಸಿ