ಸೋಮವಾರ, ಏಪ್ರಿಲ್ 4, 2011

ಕಾವ್ಯ ಕುತೂಹಲಿಗಳಿಗೆ ಯುಗಾದಿ ಶುಭಾಶಯಗಳು :)

ಯುಗವು ಕಳೆದಿರೆ ಯುಗವು ಬರುತಿರೆ
ಜಗದಿ ನೋವನು ನಲಿವನೊಂದೇ
ನಗೆಯ ಮೊಗದಲೆದರಿಸುವುದರಲಿ ಹಬ್ಬದಾದರ್ಶ (ಪರ್ವಸಾರ್ಥಕ್ಯ)
ಹಗುರಬಗೆಯಲಿ ಭಾವ ಲತೆಗಳು
ಚಿಗುರಿ ಕವನದ ಫಲಗಳರಳುತ
ಸಿಗಲಿ ರಸಿಕಗೆ ಭಾವನಾವೀನ್ಯದಲಿ ರಸದೂಟ

5 ಕಾಮೆಂಟ್‌ಗಳು:

  1. ದೇವದೇವನ ತಂದೆಯಾ ವಸು
    ದೇವ ಹಿಡಿದನು ಖರನ ಪಾದವ
    ಯಾವಗತಿ? ಯುತ್ತಮರು ಹೀನರನಾಶ್ರಯಿಸಬೇಕೇ?
    ಭಾವಿಸದೆ ಜನ ತಾರತಮ್ಯವ
    ನಾವಿಧದಿ ಬೆರೆತೆಲ್ಲಜನರೊಳು
    ಜೀವಿಸಲು ಸೂಚನೆಯೆ ಶ್ರೀಖರನಾಮವತ್ಸರದಿ?

    ಪ್ರತ್ಯುತ್ತರಅಳಿಸಿ
  2. chandramouli avare,
    ಅದ್ಭುತವಾಗಿ ಬರೆದಿದ್ದೀರ ಸರ್ :)

    ಪ್ರಿಯ ಕಣಾದ,
    ಯುಗಾದಿ ಸರಿ ಮಾಡಿದ್ದೇನೆ, ಅದರ ಜೊತೆ ಅರಿಸಮಾಸ, ಶಿಥಿಲ ದ್ವಿತ್ವವನ್ನು ಸರಿಮಾಡಿದ್ದೇನೆ. ನಿಮ್ಮ ಮತ್ತು ಪ್ರಸಾದು ಅವರ ಸಲಹೆಗೆ ಧನ್ಯವಾದ. ಹಬ್ಬದಾದರ್ಶ ಕೂಡ ಅರಿಸಮಾಸ ಎಂದು ತೋರುತ್ತದೆ, ಏನು ತೋಚುತ್ತಿಲ್ಲ :)

    ಪ್ರತ್ಯುತ್ತರಅಳಿಸಿ
  3. ಕಣಾದ :)
    "ಪರ್ವಸಾರ್ಥಕ್ಯ" ಬಹಳ ಚೆನ್ನಾಗಿದೆ, ಅದನ್ನು ಹಾಕ್ತೀನಿ

    ಪ್ರತ್ಯುತ್ತರಅಳಿಸಿ