ಶನಿವಾರ, ಜುಲೈ 23, 2011

क्षुत्क्षामोपि जराकृशोपि शिथिलप्रायोपि... ಕನ್ನಡದಲ್ಲಿ

ಆದಿಪ್ರಾಸವಿರದ ವಾರ್ಧಕ ಷಟ್ಪದಿ

ಕ್ಷಾಮವತಿಯದೊಡೇನ್? ರೋಗದಿಂ ಕೃಶನಾಗೆ
ಶಿಥಿಲಪ್ರಾಯವು ಬಡಿದು ಹತ್ತಾರು ಕಷ್ಟಗಳ -
ನಿಂದ ಬುಧ್ಧಿಯು ಸಮತೆ ಕಳೆಚಿರಲು ದೇಹದಿಂ ಪ್ರಾಣಜಾರುತಲಿರ್ದೊಡೇನ್?
ಮದಗಜಗಳಧಿಪನಲಿ ನೆತ್ತಿ ಸೀಳುತ ಕವಳ
ಸವೆಯ ಬಯಸುವವೊಂದೆ ಮನದಾಸೆ ಹೊಂದಿರ್ಪ
ಮಹನೀಯಮಾನಿಗಳ ಮೊದಲಿಗನು ಕೆಸರಿಯು ಜೀರ್ಣಿಪನೆ ಹುಲ್ಲ ತಿಂದು?

1 ಕಾಮೆಂಟ್‌:

  1. ಸೋಮರವರೇ,
    ಬಿಡುವು ಮಾಡಿಕೊಂಡು ಈ ವಾರ್ಧಕ ಷಟ್ಪಧಿಯ ಕಾವ್ಯವನ್ನು ಓದಿದೆ. ನಿಜ ಕೇಸರಿಗಳು ಮತ್ತು ಹುಲಿಗಳಂಥಾ ವ್ಯಕ್ತಿತ್ವದವರು ಹುಲ್ಲು ತಿನ್ನದೇ ಇರುವುದರಿಂದ ಅವುಗಳ ಸಂತತಿ ವಿನಾಶದ ಅಂಚಿನಲ್ಲಿದೆ!ನಿಮ್ಮ ಅನುವಾದ ಚೆನ್ನಾಗಿದೆ; ಒಂದೆರಡು ಕಡೆ ಮುದ್ರಾರಾಕ್ಷಸನ ಹಾವಳಿ ಕಂಡು ಬಂದಿದೆ - ಅದನ್ನು ನೀಗಿಸಿಕೊಳ್ಳುವಿರೆಂದು ತಿಳಿಯುತ್ತೇನೆ.

    ಪ್ರತ್ಯುತ್ತರಅಳಿಸಿ