ಮಂಗಳವಾರ, ಮೇ 3, 2011

ಹಿಮದ ಮಳೆ ಮತ್ತು ನೀರಿನ ಮಳೆ ಸಂವಾದ (ಕಗ್ಗದ ಶೈಲಿಯಲ್ಲಿ )

ಮೊದಲನೇ ಪದ್ಯದಲ್ಲಿ ಪ್ರತಿ ಸಾಲಿನಲ್ಲೂ ಪೂರ್ವಾರ್ಧ ಹಿಮ ಹೇಳಿದರೆ ಉತ್ತರಾರ್ಧ ನೀರಿನದು.
ಎರಡನೇ ಪದ್ಯದಲ್ಲಿ ಮೊದಲೆರಡು ಸಾಲು ಹಿಮದ ಹೇಳಿಕೆ, ಕಡೆ ಎರಡು ಸಾಲು ನೀರಿನ ಹೇಳಿಕೆ :)

ಪರ್ವತಕೆ ನಾಮಕುಟ, ಬಿಸಿಲೊಳೇನ್ ನಿನ್ನಗತಿ?
ಹಾರ್ವ ಹಾಲ್ಹನಿಗಳವ, ಕುಡಿಯಲಹುದೇನೋ?
ಓರ್ವನನ್ನಲೆಬಿಳುಪು, ಕರ್ತನೇಳ್ಬಣ್ಣಗಳ
ಸೋರ್ವನೀನೇತಕೆಲೊ?ನಿರ್ಮಲತೆಗೆ || ೧ ||

ನಳನಳಿಪ ಸುರ ಪಾರಿಜಾತ ದಳಗಳ ಪೋಲ್ವ
ಫಳಫಳನೆ ಹೊಳೆವಂಬರವು ತಿರೆಗೆ ನಾನು
ಬಿಳಿಗಂಟನಿನ್ನೊಡಲಳಾರ್ದ್ರತೆಯದೆಲ್ಲಿಹುದು?
ಇಳೆ ಗರ್ವವೇಳಿಗೆಯು ತಿಳಿ ಮರುಳನೇ || ೨ ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ