ಸೋಮವಾರ, ಮೇ 2, 2011

ನೆ(ಜ)ಲಸಮನಾದ ಒಸಮ

ಹಸನ ಮಾಳ್ಪೆನು ಜಗವನೆಂದೆನು
ತೊಸರುತಲವರಿವರನೆತ್ತರನು
ಜಸವಪಡೆವೆಂದುಬ್ಬಿ ಹರಿದಿಹುದು ಹುಂಬುಹೊನಲು |
ಅಸಮನೆಂದಿಹನೊಸಮನಬ್ಧಿ
ಗೆಸದೆನೆಂದೊಬಮನೂರತಡ
ಹಿಸಲು ಸೀರೊಡೆದೇಳಲಿಹುದು ರಕುತಬೀಜಗಳು ||

ಹಸನಮಾಳ್ಪೆನು ಜಗವನೆಂದೆನು
ತೊಸರುತಲವರಿವರರಕುತವನು
ಜಸವಪಡೆದೆನುತಲು
ಬ್ಬಿ
ಹರಿದಿಹುದೋ
ಹುಂಬುಹೊನಲು |
ಅಸಮನೆಂದಿಹನೊಸಮನಬ್ಧಿಯ
ಲೆಸದೆನೆಂದೊಬಮನೂರತಡವ
ರಿಸೆ ರಕುತಬೀಜನಕುಡಿಯು ಸಾವಿರದೆ ಸಿಡಿದೇಳ್ವುದು ||

4 ಕಾಮೆಂಟ್‌ಗಳು:

  1. ಚೆನ್ನಾಗಿದೆ...
    ಅಸಮನೆಂದಿಹನೊಸಮ ಮತ್ತು ಎಸದೆನೆಂದೊಬಮ....ಒಳ್ಳೆಯ ಪ್ರಯೋಗ...
    ಸ್ವಲ್ಪ ಗಣಿತ ವ್ಯತ್ಯಾಸವಿದೆ....

    ತೊಸ ರು ತ ಲ ವ ರಿ ವ ರ ನೆ ತ್ತ ರ ನು
    U U U U U U U U U - U U U

    ನೆತ್ತರನು ಎ೦ಬಲ್ಲಿ ಮಾತ್ರಾ ಸ೦ಖ್ಯೆ ಒ೦ದು ಹೆಚ್ಚಾಗಿದೆ. ೩*೪ ಆಗಬೇಕು ೪*೩ ಆಗಿದೆ.

    ಹಾಗೆಯೇ,
    ಅಸಮ ನೆಂದಿಹ ನೊಸಮ ನಬ್ಧಿ
    ಕೊನೆಗೆ ಒ೦ದು ಮಾತ್ರೆ ಕಡಿಮೆ ಯಾಗಿದೆ...ಅಬ್ಧಿಯಲೆಸದೆ ಎ೦ದಿದ್ದರೆ ಒಕೆ.
    ಹಿಸಲು ಸೀರೊಡೆ ದೇಳ ಲಿಹು(ದು) ರಕುತ ಬೀಜಗಳು
    ಲಿಹುದೀ ಆಗಿದ್ದರೆ ೪ ಮಾತ್ರೆ ಸರಿಯಾಗುತ್ತಿತ್ತು...

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಶ್ರೀಶ, ಧನ್ಯವಾದಗಳು. ಪದ್ಯವನ್ನು ತಿದ್ದಿರಿಸಲಾಗಿದೆ.

    ಪ್ರತ್ಯುತ್ತರಅಳಿಸಿ
  4. ಸತ್ತನೊಸಮೆ೦ದೊಬಮಹೇಳಿಮ
    ಹತ್ತರದ ವಾರ್ತೆಯುಗ್ರರುಗ
    ಳ್ಗುತ್ತರದವೋಲ್ ಮೂಡಿಬರಲಾಸೆ ಭಾವವು ಜಗದೊಳ್|
    ಅತ್ತಲವರಾ ಪಾತಕಿಯಕೊಲ
    ಲಿತ್ತಲೋಟಿಗೆ ಹಾಕಿ ಲೆಕ್ಕವ
    ಹೆತ್ತ ತಾಯಿಯ ಕತ್ತು ಕುಯ್ಯುವ ಷ೦ಡ ಸ೦ತಾನ ||

    ಪ್ರತ್ಯುತ್ತರಅಳಿಸಿ